ಅಮರಕೋಶ_अमरकोश_Amar's Cocoon
ನಾನೇಕೆ ಬರೆಯಬೇಕು? ಎಂಬ ಸ್ವಗತ ಪ್ರಶ್ನೆಗೆ ಎಷ್ಟೋ ಬರಹಗಾರರು ಈಗಾಗಲೇ ಉತ್ತರ ಹುಡುಕಲು ಪ್ರಯತ್ನಿಸಿದ್ದಾರೆ. ಆದರೆ ಅವೆಲ್ಲ ಉತ್ತರಗಳು, ಕಾರಣಗಳು ಅವರವರ ಭಾವಕ್ಕೆ, "ಪ್ರಭಾವಕ್ಕೆ" ಸೀಮಿತಗೊಂಡಿರುತ್ತವೆ! ಸದ್ಯಕ್ಕೆ ನನ್ನ ಕೆಲವು ಕವನಗಳನ್ನು ಇಲ್ಲಿ ಇ-ಮುದ್ರಿಸುತ್ತಿದ್ದೇನೆ! ಅಗಸ ಗೋಣಿ ಚೀಲವನ್ನು ಮೊದ ಮೊದಲು ಎತ್ತೆತ್ತಿ ಒಗೆದಂತೆ ನಾನು ಪ್ರತಿದಿನ ಒಂದೊಂದು ಹೊಸ ಕವನ ಹಾಕ್ತಿದ್ದೇನೆ ;) ಭವಿಷ್ಯದಲ್ಲಿ ಸಹ ಬರೆಯಲು, ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸ್ಫೂರ್ತಿ,ಆಸಕ್ತಿ,ಸಮಯ ನನಗೆ ಸಿಗಲಿ ಎಂದು ನಿಮ್ಮ ಹಾರೈಕೆಯನ್ನು, ಅನಿಸಿಕೆ, ಅಭಿಪ್ರಾಯ ನಿರೀಕ್ಷಿಸುವ ನಿಮ್ಮ ಗೆಳೆಯ, ಅಮರ್:)
Monday, September 23, 2019
Wednesday, July 11, 2018
Wednesday, September 20, 2017
ಹಿಂದೀ ಹಾಡುಗಳೂ ಮತ್ತು ಹಿಡಿದಿಡಲಾಗದ ನೆನಪುಗಳೂ ....
- (ನನ್ನ ಪ್ರೀತಿಯ,ಮುದ್ದು ಬಾಬಾಗೆ ಸಮರ್ಪಿತ)
ಕಾರ್ಕಳ
sss - ಬಜೆಗೋಳಿ sss - ಮಾಳ sss - ಕಳಸ - ಹೊರನಾಡು
.... ಹೀಗೆ ಕೂಗಿ ಕರೆಯುತ್ತಿದ್ದ ಪ್ರೈವೇಟ್
ಬಸ್ಸಿನ ಏಜೇಂಟ್/ ಕಂಡಕ್ಟರ್! ನಾನು
ಕುದುರೆಮುಖ/ ಶೃಂಗೇರಿಗೆ ಸಾಗುವ ಘಾಟಿ
ರಸ್ತೆಯ ತಪ್ಪಲಿನಲ್ಲಿರುವ ಶಾಂತ, ಸುಂದರ, ಸ್ವರ್ಗ
ಸದೃಶವೆನ್ನಬಹುದಾದ ಒಂದು ಚಿಕ್ಕ ಹಳ್ಳಿಯಾದ
ಮಾಳ-ಮುಳ್ಳೂರಿನಲ್ಲಿರುವ ನನ್ನ
ಅಜ್ಜಿಮನೆಗೆ ಹೋಗಲು ಆ ಬಸ್ಸನ್ನು
ಹತ್ತಿ ಕೂತಿದ್ದೆ! ಡ್ರೈವರನು ಕಾರ್ಕಳ
ಬೈಪಾಸ್ pass ಆದೊಡನೆ ಹಾಡಿನ ಪ್ಲೇಯರ್ನ
ವೊಲ್ಯೂಮ್ ಹೆಚ್ಚಿಸಿದ :) "ಸಾತ್
ಸಮುಂದರ್
ಪಾರ್
ಕರ್
ಕೇ
ಪೀಛೇ
ಪೀಛೇ
..ಆಗಯಿ..
ತೇರೇ
ಪೀಛೇ
ಪೀಛೇ
ಆಗಯೀ
.... " ಎಂಬ ಸಾಧನಾ ಸರ್ಗಮ್ ಹಾಡಿದ್ದ
"ವಿಶ್ವಾತ್ಮಾ" ಚಿತ್ರದ ಹಾಡು ಬರುತ್ತಿತ್ತು!
ಬೆಂಗಳೂರಿನಂಥ ಸಪ್ತ ಸಮುದ್ರ ದಾಟಿ
ನಮ್ಮಜ್ಜಿ ಮನೆಯಂಥಾ ಬೆಡಗು (ಅಡಗು)ದಾಣಕ್ಕೆ(!?) ಹೋಗುತ್ತಿದ್ದೇನೋ ಎಂಬ ಭಾವನೆ ಮೂಡಿಸುವಂತಿತ್ತು!
ಪ್ರತಿದಿನ ಕಾಲೇಜಿಗೆ ಹೋಗುವಾಗ ಮತ್ತು
ಹಿಂದಿರುಗಿ ಬರುವಾಗ ಕೇಳುತ್ತಿದ್ದ ಅಂದಿನ
ಸೂಪರ್ ಹಿಟ್ ಹೊಸ ಹಿಂದಿ
ಚಿತ್ರದ ಹಾಡುಗಳು ನನಗಂತೂ ಬಾಯಿಪಾಠವಾಗಿತ್ತು!
ಈ ನೆನಪಿನಂಗಳದಲ್ಲಿ ನಲಿದಾಡಲು ಏನು ಕಾರಣ
ಎಂದು ಕೇಳುತ್ತಿದ್ದೀರಾ? ಇನ್ನೇನೂ ಇಲ್ಲ ... ಇಂದು
ಎಷ್ಟೋ ದಿನಗಳ ನಂತರ ೯೦ರ
ದಶಕದ ಸಾಧನಾ ಸರ್ಗಮ್ ಹಾಡಿದ್ದ
ಹಾಡುಗಳನ್ನು ಆಫೀಸಿನಲ್ಲಿ ಕೆಲಸ ಮಾಡುವಾಗಲೇ...ಹಿನ್ನೆಲೆಯಲ್ಲಿ
ಹೇಳಿಸಿಕೊಳ್ಳುತ್ತ ಕೂತಿದ್ದ್ದೆ! ಆ ಒಂದೊಂದು
ಹಾಡೂ ಸವಿ ನೆನಪುಗಳ ಗುಚ್ಛದ
ಪರಿಮಳವನ್ನು ಮತ್ತೆ ಮತ್ತೆ ಬೀರಿತ್ತು...
ಹೊಸ-ಹೊಸ ಹಳೆ
ನೆನಪುಗಳ ತರಂಗಗಳ ತೇಲಿಬಿಟ್ಟಿತ್ತು :)
ನನಗೆ ಮತ್ತು ನನ್ನ ಅಕ್ಕಂದಿರಿಗೆ
ಚಿಕ್ಕ ವಯಸ್ಸಿನಿಂದಲೂ ಸಂಗೀತದಲ್ಲಿ ಅಪಾರ ಆಸಕ್ತಿ. ನನ್ನ
ತಂದೆಯವರ ಪ್ರಭಾವದಿಂದ ಹಿಂದಿ ಚಿತ್ರಗೀತೆಗಳ ಬಗ್ಗೆ
ಅಭಿರುಚಿ ನಮಗೆ ಗೊತ್ತಿಲ್ಲದೆಯೇ ಬೆಳೆದಿತ್ತು!
ಹಳೆಯ ಹಿಂದಿ ಚಿತ್ರ ಸಂಗೀತದ
ಸುವರ್ಣ ಯುಗದ ಹಾಡುಗಳನ್ನು ಅವರು
ಪ್ರತಿ ರಾತ್ರಿ ಮಲಗುವ ಮುನ್ನ
ವಿವಿಧ
ಭಾರತಿಯ “ಜಯ್
ಮಾಲಾ”, “ಛಾಯಾ ಗೀತ್”, “ಭೂಲೇ
ಬಿಸ್ರೇ ಗೀತ್” ಮತ್ತು “ಆಪ್
ಕೀ ಫರ್ಮಾಯಿಷ್” ಕಾರ್ಯಕ್ರಮಗಳಲ್ಲಿ
ಕೇಳುತ್ತಿದ್ದರು! TV ಎಂಬ ಮಾಯೆ ಇಲ್ಲದಿದ್ದ
ಆ ಕಾಲದಲ್ಲಿ ಆ
ಹಾಡುಗಳನ್ನು ಜೋಗುಳದಂತೆ ಕೇಳಿ ಮಲಗುತ್ತಿದ್ದೆವು
ನಾವು :)
ನಮ್ಮ ಪ್ರೀತಿಯ, ಮುದ್ದು ಬಾಬಾಗೆ
(ನಮ್ಮ ತಂದೆಯವರನ್ನು ಸಂಬೋಧಿಸಲು ಬಳಸುವ ಮರಾಠೀ
ಪದ) ಬೈಜು ಬಾವ್ರಾ,
ಅನಾರ್ಕಲೀ, ಮುಘಲ್-ಏ-ಆಝಮ್,
ನವರಂಗ್, ಆವಾರಾ, ಶ್ರೀ ೪೨೦,
ದಿಲ್ ದಿಯಾ ದರ್ದ್ ಲಿಯಾ,
ಪ್ಯಾಸಾ ಹೀಗೇ ಇನ್ನೂ ಹತ್ತು
ಹಲವು ಮೀನಾ ಕುಮಾರೀ, ಗುರುದತ್,
ದಿಲೀಪ್ ಕುಮಾರ್, ರಾಜ್ ಕಪೂರ್,
ರಾಜ್ ಕುಮಾರ್, ಅಮಿತಾಭ್ ಬಚ್ಚನ್
ರ ಸಿನಿಮಾಗಳೆಂದರೆ ಅಚ್ಚುಮೆಚ್ಚು!
ಪ್ರತೀ ಚಿತ್ರದ ನಿರ್ದೇಶಕರು, ಕಲಾವಿದರು,
ಸಂಗೀತ ನಿರ್ದೇಶಕ, ಸಾಹಿತ್ಯ ಬರೆದವ
ಈ ಎಲ್ಲಾ ಮಾಹಿತಿ
ಇಂದಿಗೂ ಬಾಯಿಪಾಠವಿದೆ! ಅವೆಲ್ಲ ಮಾಹಿತಿಯ ಜೊತೆಗೆ,
ಆ ಚಿತ್ರ ತಮ್ಮ
ಪ್ರೀತಿಯ ಬೆಂಗಳೂರಿನ ಯಾವ ಚಿತ್ರ
ಮಂದಿರದಲ್ಲಿ ಬಂದಿತ್ತು ಅನ್ನುವ ವಿವರ
ಸಹ ಅವರು ಹೇಳುತ್ತಾರೆ!
Actually, he used to watch, enjoy, live, breathe ಮೂವೀಸ್!
ಇಲ್ಲಿ ಭಾಷೆಗಳ ಬಗ್ಗೆ ನಮ್ಮ
ಮೆನೆಯಲ್ಲಿ ಏಕೆ "ವಿಶಾಲ ಮನೋಭಾವನೆ"
ಬಂದಿತು ಎಂಬುದಕ್ಕೆ ಕಾರಣ ನನ್ನ
ಬಾಬಾ ಅವರು ಅಂತ ನನ್ನ
ಅಭಿಪ್ರಾಯ! ಅಂದು ಅವರು ಹಿಂದೀ,
ಕನ್ನಡ, ಆಂಗ್ಲ, ತಮಿಳು, ತೆಲುಗು,
ಬಂಗಾಳಿ ಹೀಗೆ ಭಾಷೆಗಳ ಎಲ್ಲೇ
ಮೀರಿ, ಒಬ್ಬ ಹೀರೋಗಾಗಿಯೋ, ಕಥೆಗಾಗಿಯೋ,
ಸತ್ಯಜೀತ್ ರೇ, ಶ್ಯಾಮ್ ಬೆನೆಗಲ್,
ಹೃಷಿಕೇಶ್ ಮುಖರ್ಜಿ ಅಂಥವರ ಜಾಗತಿಕ
ಮಟ್ಟದ ನಿರ್ದೇಶಕರ ಕೆಲಸ ನೋಡಿ
ಅನುಭವಿಸುವುದಕ್ಕೋಸ್ಕರ ನೋಡಿದ್ದಾರೆ! ಅದರಲ್ಲೂ ಮುಖ್ಯವೇನೆಂದರೆ ಅಷ್ಟೇನೂ
ದೊಡ್ಡ ಕೆಲಸದಲ್ಲಿರದಿದ್ದರೂ ತನಗೆ ಬರುವ ಸಂಬಳದಲ್ಲೇ
ಒಮ್ಮೊಮ್ಮೆ ಮೈಲಿಗಟ್ಟಲೆ ನಡೆಯುತ್ತಲೇ ಥಿಯೇಟರ್ಗೆ ಹೋಗಿ, ಮತ್ತೊಮ್ಮೆ
ಒಮ್ಮೆ ಹೋದಾಗಲೇ ೨ ಬ್ಯಾಕ್
ಟು ಬ್ಯಾಕ್ ಶೋಗಳನ್ನು
ಮುಗಿಸಿಯೇ ಬರುವಷ್ಟು ಸಿನೆಮಾ ಒಲವಿತ್ತಂತೆ
ಅಂತ ಹೇಳುತ್ತಿದ್ದರು! ಅವರು
ತಮ್ಮ ೫೦ ನೇ
ವಯಸ್ಸಿನ ಹೊತ್ತಿಗೆ ವಿವಿಧ ಭಾಷೆಗಳ
ಸುಮಾರು ೫೦೦ ಚಿತ್ರಗಳನ್ನು ನೋಡಿದ್ದಾರೆ!
(ಅಥವಾ ಇನ್ನೂ ಹೆಚ್ಚು ಇರಬಹುದು
ಅನ್ನಿಸುತ್ತದೆ!) ನಮಗೂ ಸಹಾ ಒಳ್ಳೆಯ
ಮಕ್ಕಳ ಸಿನೆಮಾ, ಡಾನ್ಸ್ ಮತ್ತು
ಸಂಗೀತದ ಕಥೆಯೊಳಗೊಂಡ ಚಿತ್ರಗಳನ್ನು ಹಠತೊಟ್ಟು ತೋರಿಸಿದ್ದಾರೆ :)
ಅವರ ಅಚ್ಚುಮೆಚ್ಚಿನ "ಅಕ್ಕಾ", ಭಾರತರತ್ನ ಲತಾ ಮಂಗೇಶ್ಕರ್(ಅವರೇ ಸಂಬೋಧಿಸುವಂತೆ) ರ
ಅನೇಕ ಹಾಡುಗಳೆಂದರೆ ಅವರಿಗೆ ಪಂಚ ಪ್ರಾಣ!
ಮಹಮ್ಮದ್ ರಫಿ, ಮನ್ನಾಡೇ, ಆಶಾ
ಭೋಸ್ಲೆ, ಉಷಾ ಭೋಸ್ಲೆ, ಮುಕೇಶ್,
ಗೀತಾ ಬಾಲೀ ಹೀಗೆ ಎಲ್ಲ
ಗಾಯಕರ ಹಾಡುಗಳನ್ನು ಅತಿ ಆಸಕ್ತಿ, ಭಕ್ತಿಯಿಂದ
ಕೇಳಿ ಆಸ್ವಾದಿಸುತ್ತಿದ್ದರು, ಅದರ ಬಗೆಗಿನ ಸ್ವಾರಸ್ಯಕರ
ವಿಷಯಗಳನ್ನೂ ಕೇಳಲು ಮರೆಯುತ್ತಿರಲಿಲ್ಲ! ಶಂಕರ್
ಜೈ ಕಿಶನ್, ಸಿ.
ರಾಮಚಂದ್ರ, S.D. ಬರ್ಮನ್ ಇವರ ಹೆಸರುಗಳನ್ನೆಲ್ಲ
ಅವರ ಬಾಯಿಂದ ಆಗಾಗ
ಕೇಳಿಸುತ್ತಿದ್ದವು! ಇವೆಲ್ಲ ನಮಗೆ ಅರಿವಿಲ್ಲದೆಯೇ
"ಸಂಗೀತ ಸಂಸ್ಕಾರ", ಜ್ಞಾನ ಒದಗಿಸುತ್ತಿತ್ತು!
ಬೆಳಿಗ್ಗೆ
ಅಮ್ಮಾ ಕನ್ನಡ ಚಿತ್ರೆಗೀತೆಗಳನ್ನು ನಂದನ,
ಬೃಂದಾವನ ಮುಂತಾದ ಕಾರ್ಯಕ್ರಮಗಳಲ್ಲಿ ಕೇಳುತ್ತಿದ್ದರು!
ಅದರ ಮಧ್ಯೆ ಅಮ್ಮ
ಅವರ ಬಾಲ್ಯದ ಹರೆಯದ
ಸಮಯದಲ್ಲಿ ಕೆಲವು ಅಂದಿನ ಹಿಂದಿ/
ಕನ್ನಡ ಹಾಡಿನ ಧಾಟಿಯಲ್ಲೇ ಹಾಡುತ್ತಿದ್ದ
"ತುಳು" ಹಾಡುಗಳನ್ನು ನೆನಪಿಸಿಕೊಂಡು ನಗುತ್ತಿದ್ದರು :) ಆ ತುಳು
ಹಾಡುಗಳಲ್ಲಿ ಕೆಲವು ನನ್ನ ತಾಯಿಯವರ
ಕೆಲ ತರಲೆ ತಮ್ಮಂದಿರು
ಬರೆದವು ಅಥವಾ ಮತ್ತೆ ಕೆಲವು
ಅಂದಿನ ಶಾಲಾ ನಾಟಕಗಳಲ್ಲಿ ಬಳಸಿದ
ಹಾಡುಗಳಾಗಿದ್ದವು! ಹೀಗೆ ಭಾಷೆಗಳೂ ನಮಗೆ
ಯಾವಾಗಲೂ ಹೆಚ್ಚಿನ ಜ್ಞಾನ, ಅರಿವು,
ಸ್ವಾರಸ್ಯ, ಅಭಿರುಚಿಯನ್ನೇ ದೊರಕಿಸಿಕೊಟ್ಟಿದೆ ಹೊರತು ನಷ್ಟವನ್ನು ಎಂದೂ
ಉಂಟುಮಾಡಿಲ್ಲ!ಅದರ ಮಧ್ಯೆ ಬರುತ್ತಿದ್ದ
"ದೀಪಂ
ಸಿಲ್ಕ್
ಸೀರೆಗಳೂ
... ಮೋಹಕವೂ,
ಮನೋಹರವೂ
...ಬೆಡಗಿನಲೀ
ಉಡಬಹುದು
.... ದೀಪಂ
.... ", "ಮಂಜಿನಂತೆ ಅರಳಿದೆ ನಿನ್ನ
ಮುಖಾರವಿಂದ,
ಹಂದರ್ದ್
ನ
ಸಾಫೀ
ಈ
ಚೆಲುವು
ಅರಳಿಸಿದೆ!"... ಮುಂತಾದ ಹಲವು ಜಾಹೀರಾತುಗಳು ನಮಗೆ
ಬಾಯಿಪಾಠವಾಗಿದ್ದವು! ಅದರಲ್ಲೂ ನನ್ನ ಚಿಕ್ಕ
ಅಕ್ಕ ಅಂತೂ ಹಾಡಿನ ಅಥವಾ
ಜಾಹೀರಾತಿನ ಆರಂಭದ "ಟ್ಯೂನ್" ಕೇಳಿದೊಡನೆ ಆ ಹಾಡು
ಯಾವುದು ಎಂದು ಹೇಳಿಬಿಡುತ್ತಿದ್ದಳು!
ನನ್ನ ಮತ್ತು ನನ್ನ ಕುಟುಂಬದ
ಎಲ್ಲ ಸದಸ್ಯರಿಗೂ ಎಷ್ಟೋ ಹಿಂದಿ
ಚಿತ್ರಗೀತೆಗಳು ಕಂಠಸ್ಥವಾಗಿವೆ, ನಾವೆಲ್ಲಾ ಒಟ್ಟಿಗೆ ಸೇರಿದಾಗ,
ಎಲ್ಲಿಗಾದರೂ ಪ್ರಯಾಣಿಸುವಾಗ ಮತ್ತೆ ಮತ್ತೆ ಆ
ಸುಮಧುರ ಗೀತೆಗಳ ಗುನುಗು, ಅವುಗಳ
ಅಂತಾಕ್ಷರೀ ಆಟ, ಆ ಅರ್ಥಗರ್ಭಿತ
ಸಾಹಿತ್ಯದ ಆಸ್ವಾದ ...ವಾಹ್! ಅದೊಂದು
ಅದ್ಭುತ ಅನುಭೂತಿ :)
ನಮ್ಮ ವಯಸ್ಸಿಗೂ ಮತ್ತು ಕೆಲವು
ರೋಮ್ಯಾಂಟಿಕ್ ಹಾಡುಗಳಿಗೂ ಬಹಳ ಗಾಢವಾದ
ಸಂಬಂಧ ನಮ್ಮ ಮನದಲ್ಲಿ ಏರ್ಪಟ್ಟಿರುತ್ತದೆ
ಎಂಬುದು ಮತ್ತೊಂದು ಸತ್ಯ. ಒಮ್ಮೆ
ಒಂದು ಹಾಡು, ಅದರ ಧಾಟಿ
ಇಷ್ಟವಾಗಿ ಅದು ನಮ್ಮ ಮನದಲ್ಲಿ
ಇಳಿಯಿತೆಂದರೆ ಸಾಕು! ಮುಂದೆ ಹತ್ತು
ವರ್ಷಗಳ ನಂತರ ಅದನ್ನೇ ಕೇಳಿದರೆ,
ಮತ್ತೆ ಅದೇ mood, ಅಂದಿನದೇ ಉಲ್ಲಾಸ
ಮನದಲ್ಲಿ ಮೂಡುತ್ತದೆ! ಅಂದು ಕಂಡ ಕನಸುಗಳು,
ಅಂದಿನ ನಮ್ಮ ಅರೆ-ಮುಗ್ಧ,
ಅರೆ-ವಯಸ್ಕ, ಅರೆ-ಹುಚ್ಚು ಮನಸ್ಥಿತಿಗಳೂ ಒಟ್ಟಿಗೇ
ಮನಃಪಟಲದ ಮುಂದೆ ಹಾದು ಹೋದಾಗ
ಮುಗುಳ್ನಗು ಮುಖದಲ್ಲಿ ಮೂಡದೇ ಇರದು
:)
ಹಿಂದಿ ಹೇರಿಕೆಯ ಕೂಗು ಕನ್ನಡನಾಡಿನ
ಮಾಧ್ಯಮಗಳಲ್ಲಿ ಪ್ರತಿಧ್ವನಿಸುತ್ತಿರುವಾಗಲೇ ... ಹಿಂದಿ ಚಿತ್ರ ಗೀತೆಗಳೊಂದಿಗಿನ
ನನ್ನ ಬಿಟ್ಟಿರಲಾಗದ ಬೆಸುಗೆಯ ಬಗ್ಗೆ ಬರೆವ
ಹಂಬಲವಾಯ್ತು! ಭಾಷೆಗೂ, ಸಂಗೀತಕ್ಕೂ ಸಂಬಂಧವಿಲ್ಲ...ಇಂದಿನ ಯುಗದಲ್ಲಿ ಯಾವೊಬ್ಬ
ಮನುಷ್ಯನೂ ತನ್ನ ಭಾಷೆಯನ್ನು ಮಾತ್ರ
ಕೇಳಿಸಿಕೊಂಡು, ಮಾತಾಡಿಕೊಂಡು ಬೆಂಗಳೂರಿನಂಥಾ ಮಹಾನಗರದಲ್ಲಿ ಬದುಕಲು ಸಾಧ್ಯವೇ? ಕನ್ನಡ,
ಹಿಂದಿ, ತಮಿಳು, ತೆಲುಗು.... ಇತ್ತೀಚಿಗೆ
ಮಲಯಾಳೀ ಸಹ ಬೆಂಗಳೂರಲ್ಲಿ
ಕೇಳಿಸುವುದು ಹೊಸತಲ್ಲ! ಬೇರೆ ಜನರನ್ನು
ಅವ್ಯಾಹತವಾಗಿ, ಸ್ವಾಭಿಮಾನ, ಪ್ರತಿರೋಧ ತೋರದೇ ಒಳಗೆ
ಬಿಟ್ಟುಕೊಂಡು ಅವರ ಭಾಷೆ, ಸಂಸ್ಕೃತಿ
(ಕೆಲವೊಮ್ಮೆ ಕುಸಂಸ್ಕೃತಿ) ನಮ್ಮ ಮೇಲೆ ಪ್ರಭಾವ
ಬೀಳಬಾರದು ಎಂದು ಹೇಳುತ್ತಿರುವುದು ಒಂದು
ಹಾಸ್ಯಾಸ್ಪದ ಬೆಳವಣಿಗೆ ಅಲ್ಲವೇ? :(
"ಅಮರ-ದೇವ"
03/Aug/2017
Subscribe to:
Posts (Atom)





