Saturday, August 9, 2014

।। ಶ್ರೀ ಗಣೇಶಾಯ ನಮಃ ।।|

ಹಿರಿಯ "ಬ್ಲಾಗರಸ"ರಿಗೆ (Blogger's) ತಲೆ ಬಾಗಿ....

ಬ್ಲಾಗಿಂಗ್ ಜಗತ್ತು ಆರಂಭವಾಗಿ ಇಷ್ಟೊಂದು ವರ್ಷಗಳಾದರೂ, ಬರೆಯುವ, ಓದುವ ಹವ್ಯಾಸ ಇದ್ದರೂ, ಎಷ್ಟೋ ಗೆಳೆಯ/ ಗೆಳತಿಯರು ಪ್ರೊತ್ಸಾಹಿಸಿದರೂ ನಾನಂತೂ ಈ ಕೆಲಸವನ್ನು "ನಾಳೆ ಮಾಡೋಣ" ಪಟ್ಟಿಯಲ್ಲೇ ಇಟ್ಟಿದ್ದೆ! ನಾನು ಅಂತೂ ಇಂತೂ ಇಂದಿನ ಸುಮುಹೂರ್ತದಲ್ಲಿ ನನ್ನದೇ ಆದ ಬ್ಲಾಗ್ ಬರೆಯಲು ಶುರು ಮಾಡಿರುವೆ! ಅದಕ್ಕಾಗಿ ಈಗಾಗಲೇ ಬ್ಲಾಗಿಸಿ ಓದುಗರ ಮನದಲ್ಲಿ ಭರವಸೆ ಮೂಡಿಸಿರುವ ಎಷ್ಟೋ "ಬ್ಲಾಗರಸ"/ ಅರ್ಥಾತ್ ಬರಹಗಾರರಿಗೆ ತಲೆ ಬಾಗಿ ನಮಸ್ಕರಿಸುವೆ :)

ನಾನೇಕೆ ಬರೆಯಬೇಕು? ಎಂಬ ಸ್ವಗತ ಪ್ರಶ್ನೆಗೆ ಎಷ್ಟೋ ಬರಹಗಾರರು ಈಗಾಗಲೇ ಉತ್ತರ ಹುಡುಕಲು ಪ್ರಯತ್ನಿಸಿದ್ದಾರೆ. ಆದರೆ ಅವೆಲ್ಲ ಉತ್ತರಗಳು, ಕಾರಣಗಳು ಅವರವರ ಭಾವಕ್ಕೆ, "ಪ್ರಭಾವಕ್ಕೆ" ಸೀಮಿತಗೊಂಡಿರುತ್ತವೆ! ಬರೆಯುವವನಿಗೆ ತನ್ನದೇ ಆದ ಸ್ಫೂರ್ತಿ, ಕಾರಣ, ಸಮರ್ಥನೆಗಳಿರುತ್ತವೆ!

ನನ್ನಂಥ ಕೆಲ ಮಂದಿಗೆ ಸ್ವಾರಸ್ಯಕರ ಮಾತುಗಳನ್ನು ಆಡುವುದಕ್ಕೆ, ಕೇಳುವುದಕ್ಕೆ ಇಷ್ಟವಾಗುತ್ತದೆ! ಹೊಸ ಹೊಸ ವಿಚಾರಗಳ ಬಗ್ಗೆ ತಿಳಿದುಕೊಳ್ಳುವ ಹಂಬಲ; ನಮಗೆ ಗೊತ್ತಾದ ಹೊಸ ವಿಚಾರದ ಬಗ್ಗೆ ಇನ್ನೂ ಆಳವಾಗಿ ತಿಳಿಯುವ ತವಕ ಮತ್ತು ಅದನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವ ಆತುರವೂ ಇರುತ್ತದೆ ;) 

ಮತ್ತೆ ಕೆಲವರಿಗೆ ಇತರ ಸಾಹಿತಿ/ ಕವಿಗಳ ಲೇಖನ, ಕಥೆ, ಪ್ರಬಂಧ, ಕವನ ಇತ್ಯಾದಿ... ಓದಿ ಮೇಲೆ ತಾನೂ ಏಕೆ ಬರೆಯಬಾರದು ಎನಿಸಿ ಬರೆಯಲು ಪ್ರಾರಂಭಿಸುವುದುಂಟು! ಅವರಿಗೆ ಯಾವುದೇ ರೀತಿಯ ಪ್ರಚಾರ, ಹೆಸರು, ಹಣದ ಹಂಬಲ, ನಿರೀಕ್ಷೆ ಇರುವುದಿಲ್ಲ! ಅದೊಂದು ಹವ್ಯಾಸ ಆಗಿರುತ್ತದೆ!

ಇಂದಿನ ಕಂಪ್ಯೂಟರ್, ಇಂಟರ್ನೆಟ್, ಬ್ಲಾಗ್ಸ್, ಆನ್ ಲೈನ್ ಪತ್ರಿಕೆಗಳು, ಸಾಮಾಜಿಕ ತಾಣಗಳು ಮತ್ತು ಟ್ವಿಟ್ಟರ್ಗಳ ಯುಗದಲ್ಲಿ, ಕೆಲವರಿಗೆ ತಮ್ಮ ಬರಹಗಳೋ, ಕವನಗಳೋ, ಪ್ರವಾಸ ಕಥನವನ್ನೋ ತಮ್ಮ Facebook ನ ಗೋಡೆಯ ಮೇಲೆ ಹಾಕಬೇಕು, ಹಂಚಬೇಕು, ನೂರಾರು Likes ಸಿಗಬೇಕು ಎನ್ನುವ ತವಕ ಮತ್ತು  ಕುತೂಹಲ! ತಮ್ಮ ಪ್ರತಿಭೆ ಇತರರಿಗೆ ತಿಳಿಸುವ ಸಲುವಾಗಿ ಕೂಡಾ ಬರೆಯುವವರಿದ್ದಾರೆ!

ನನ್ನನ್ನು ಮೇಲ್ಕಂಡ ಯಾವ ಪಂಗಡಕ್ಕೆ ಸೇರಿಸುತ್ತೀರೊ ಅದು ನಿಮಗೆ ಅರ್ಥಾತ್ ಓದುಗರಿಗೆ ಬಿಟ್ಟಿದ್ದು :P

 

No comments:

Post a Comment