ನಾನೇಕೆ ಬರೆಯಬೇಕು? ಎಂಬ ಸ್ವಗತ ಪ್ರಶ್ನೆಗೆ ಎಷ್ಟೋ ಬರಹಗಾರರು ಈಗಾಗಲೇ ಉತ್ತರ ಹುಡುಕಲು ಪ್ರಯತ್ನಿಸಿದ್ದಾರೆ. ಆದರೆ ಅವೆಲ್ಲ ಉತ್ತರಗಳು, ಕಾರಣಗಳು ಅವರವರ ಭಾವಕ್ಕೆ, "ಪ್ರಭಾವಕ್ಕೆ" ಸೀಮಿತಗೊಂಡಿರುತ್ತವೆ!
ಸದ್ಯಕ್ಕೆ ನನ್ನ ಕೆಲವು ಕವನಗಳನ್ನು ಇಲ್ಲಿ ಇ-ಮುದ್ರಿಸುತ್ತಿದ್ದೇನೆ! ಅಗಸ ಗೋಣಿ ಚೀಲವನ್ನು ಮೊದ ಮೊದಲು ಎತ್ತೆತ್ತಿ ಒಗೆದಂತೆ ನಾನು ಪ್ರತಿದಿನ ಒಂದೊಂದು ಹೊಸ ಕವನ ಹಾಕ್ತಿದ್ದೇನೆ ;) ಭವಿಷ್ಯದಲ್ಲಿ ಸಹ ಬರೆಯಲು, ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಸ್ಫೂರ್ತಿ,ಆಸಕ್ತಿ,ಸಮಯ ನನಗೆ ಸಿಗಲಿ ಎಂದು ನಿಮ್ಮ ಹಾರೈಕೆಯನ್ನು, ಅನಿಸಿಕೆ, ಅಭಿಪ್ರಾಯ ನಿರೀಕ್ಷಿಸುವ ನಿಮ್ಮ ಗೆಳೆಯ, ಅಮರ್:)
No comments:
Post a Comment